![]() |
Home
|
WEL COME TO THE LAND OF CHALUKYS Badami (Kannada: ಬದಾಮಿ), formerly known as Vatapi, is a taluk in the Bagalkot district of Karnataka,India. |
|
ಈ ಲೇಖನವು ಚಾಲುಕ್ಯರ ರಾಜಧಾನಿಯಾಗಿದ್ದು ಬಾದಾಮಿ ಸ್ಥಳದ ಬಗ್ಗೆ ಅಡಿಗೆಗೆ ಉಪಯೋಗಿಸುವ ಬಾದಾಮಿ ಪದಾರ್ಥದ ಮಾಹಿತಿಗೆ ಈ ಲೇಖನ ನೋಡಿ. ಚಾಲಕ್ಯ ಮಹಾ ಸಾಮ್ರಾಜ್ಯದ ರಾಜಧಾನಿಯಾಗಿ ಮರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕ ಕೇಂದ್ರ ಗುಡ್ಡ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿದೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಉಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು.ಹತ್ತಿರದಲ್ಲೆ ಇನ್ನೋಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲು ಗಳೂ, ಚಾಲಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ. ಸಾಮಾನ್ಯ ಶಕವರ್ಷ 642ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು (2). ಸಾಮ್ರಾಜ್ಯದಲ್ಲಿ ಅರಾಜಕತೆ ಮೂಡಿತು. 13 ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಪುನರ್ಘಟಿಸಿದ. ಸಾ.ಶ. 780ರ ಸಾಮ್ರಾಜ್ಯ ಬಲಗುಂದುತ್ತಿತ್ತು. 752ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ (1). ಅಲ್ಲಿಗೆ ಬಾಧಾಮಿ ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು. ಇಡಿಯ ಭಾರತದ ಚರಿತ್ರೆ ಸಂಸ್ಕ್ರತಿಗಳ ಮೇಲೆ ತಮ್ಮ ಅಚ್ಚೊತ್ತದ ಚಾಲಕ್ಯರ ಬಾದಾಮಿಯ ಸರ್ವಥಾ ಪ್ರೇಕ್ಷಣೀಯ ಸರ್ವಥಾ ಆದರಣೀಯ ಬಾದಾಮಿಗೆ ಬೆಂಗಳೂರ, ಬಾಗಲಕೋಟೆ. ಬಿಜಾಪುರ,ಹೊಸಪೇಟೆ,ಹುಬ್ಬಳ್ಳಿ,ಧಾರಔಆಡ,ಗದಗ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಗದಗ-ಸೊಲ್ಲಾಪುರ ರೈಲು ಮಾರ್ಗವು ಬಾದಾಮಿಯನ್ನು ಹಾಯ್ದು ಹೋಗುತ್ತದೆ. ವಸತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC) ನಡೆಸುವ ಹೋಟೆಲ್ ಅನುಕೂಲ ವಾಗಿದೆ. |



MRC Has Bagges The e-Governence National Award
